Monday 7 October 2013

ಸಮುದಾಯದತ್ತ

ದಿನಾಂಕ:05/10/2013ರ ಶನಿವಾರದಂದು ನಮ್ಮ ಶಾಲೆಯಲ್ಲಿ ನಡೆದ ಮೊದಲ
                                                          ಸಮುದಾಯದತ್ತ ಶಾಲಾ ಕಾರ್ಯಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ನಿರಂಜನ ನಾಯಕ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆದೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ  ಶ್ರೀ ಭುಜಂಗ ಶೆಟ್ಟಿ , ಎಸ್,ಡಿ ಎಮ್ ಸಿ ಸದಸ್ಯರಾದ ಶ್ರೀ ದಿನಕರ ಶೆಟ್ಟಿ & ಇತರರು ಭಾಗವಹಿಸಿದ್ದರು. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಶ್ರೀ ವಿಶ್ವನಾಥ, ಭೌತಶಾಸ್ತ್ರ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ  ವಿತರಿಸಲಾಯಿತು. ಪಾಲಕರ ಜೊತೆ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಚರ್ಚಿಸಿ ಅಗತ್ಯ ಸಲಹೆ ನೀಡಲಾಯಿತು. ಚಿತ್ರಕಲಾ ಶಿಕ್ಷಕ ಶ್ರೀ ಶಿವಾನಂದ ಸ್ವಾಮಿ ಎನ್ ಇವರು ನಿರೂಪಿಸಿದರು. ಸಹಶಿಕ್ಷಕ ಶ್ರೀ ರೇವಣ್ಣ ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹಶಿಕ್ಷಕ ಮಹಾಬಲೇಶ್ವರ ಭಾಗ್ವತ್ ಇವರು ಸ್ವಾಗತಿಸಿ. ದೈಹಿಕ ಶಿಕ್ಷಣ ಶಿಕ್ಷಕ 
ಶ್ರಿ ಶೇಖರ್ ವಂದಿಸಿದರು. ಎಲ್ಲ ಸಹಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.




















ವರದಿ---- ಮಹಾಬಲೇಶ್ವರ ಭಾಗ್ವತ್
 ಚಿತ್ರಗಳು: ಅಭಿಷೇಕ್ 10ಎ. 

ಶ್ರಮದಾನ

ಗಾಂಧೀ ಜಯಂತಿ ಪ್ರಯುಕ್ತ ಶ್ರಮದಾನ

ಅಕ್ಟೋಬರ್ 02ರ ಗಾಂಧೀಜಯಂತಿ ಆಚರಣೆ ನಮ್ಮ ಶಾಲೆಯಲ್ಲಿ ನಡೆದ ವಿಧಾನ.








ಚಿತ್ರಗಳು:ನಿರಂಜನ ನಾಯಕ್
           ಪ್ರಭಾರಿ ಮುಖ್ಯ ಶಿಕ್ಷಕರು.

Friday 4 October 2013

ಹಸಿರು ,ಉಸಿರು

ಕ್ಷೇತ್ರ ಸಂಪನ್ಮೂಲ ಕೇಂದ್ರ ,ಕುಂದಾಪುರ ವಲಯ ಇವರ ಸಹಯೋಗದಲ್ಲಿ ಕುಂದಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಪ್ರಗತಿಪರ ಕೃಷಿಕ
 ಶ್ರೀ ರಾಮ ಭಟ್ಟ ಕೆದೂರು ಇವರಿಂದ ಕೃಷಿ ದರ್ಶನ. ಏಪ್ರಿಲ್ 2013ರಲ್ಲಿ ನಡೆದ ಕಾರ್ಯಕ್ರಮ.
ಸಂಪೂರ್ಣವಾಗಿ ಜೈವಿಕ ಗೊಬ್ಬರಗಳಿಂದ ಕೃಷಿ ನಡೆಸುತ್ತಿರುವ ರೈತ ಶ್ರೀ ರಾಮಭಟ್ಟರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಲಾಭದ ಬಗ್ಗೆ ವಿವರ ನೀಡಿದರು. ಸರಕಾರಿ ಪ್ರೌಢಶಾಲೆ ಕೋಣಿ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು & ಶಿಕ್ಷಕರಾದ ಶ್ರೀ ಸದಾನಂದ ಬೈಂದೂರು ನಮ್ಮ ಜೊತೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡ ಕ್ಷಣಗಳು.


ಚಿತ್ರಗಳು: ಶ್ರೀ ರೇವಣ್ಣ ಟಿ. ಸ.ಶಿ.ಕಲಾ 































ಕೃಷಿ ದರ್ಶನ

ರೋಟರಿ ಕ್ಲಬ್ ಕುಂದಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಕುಂದಾಪುರ ತಾಲ್ಲೂಕಿನ ಕಾಂತಾವರದಲ್ಲಿ ನಡೆದ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ನಿಸರ್ಗ ಇಕೋ ಕ್ಲಬ್ ವಿದ್ಯಾರ್ಥಿಗಳು ಭಾಗವಹಿಸಿದ್ದರು . ಆ ಸಂದರ್ಭದ ಕೆಲವು ತುಣುಕುಗಳು.ಮಾರ್ಗದರ್ಶಕ ಶಿಕ್ಷಕರು-ಶ್ರೀ ನಿರಂಜನ ನಾಯಕ್


ಚಿತ್ರಗಳು:ಗಂಗಾಧರ ಎಮ್.



Thursday 3 October 2013

ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ದಿನಾಂಕ:04/09/2013









ಚಿತ್ರಗಳು: ಗಂಗಾಧರ ಎಮ್.

                            -ಗಣಕ ಯಂತ್ರ ಶಿಕ್ಷಕರು