Friday 1 March 2013

OUR SCHOOL PHOTOS





Add caption

















ಶಾಲೆಯ 2011-12ನೇ ಸಾಲಿನ ಕೆಲವು ಕ್ಷಣಗಳು. ಅಭಿಪ್ರಾಯಕ್ಕಾಗಿ ಸ್ವಾಗತ.































ವಿಜ್ಞಾನ ದಿನಾಚರಣೆ

ವಿಜ್ಞಾನ ದಿನಾಚರಣೆ 


ದಿನಾಂಕ:28/02/2013 ರಂದು ನಮ್ಮ ಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನಮ್ಮ ಶಾಲೆಯ  ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ನಿರಂಜನ ನಾಯಕ್ ಇವರು ವಹಿಸಿದ್ದರು. ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ  ಗೀತಾ ಎಮ್ ಇವರು ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಇವರ ಜೀವನ ಸಾಧನೆ ಕುರಿತು  ಪರಿಚಯಿಸಿದರೆ, ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ವಿಜ್ಞಾನ ಶಿಕ್ಷಕಿ ಶ್ರೀಮತಿ ರಿಯಾ ಕ್ರಾಸ್ಟೊ ಇವರು ವಿಜ್ಞಾನ ದಿನಾಚರಣೆ ಮಹತ್ವ , ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಕುರಿತಾಗಿ ಉಪನ್ಯಾಸ ನೀಡಿದರು. ನಂತರ ಉಪಗ್ರಹ ಉಡಾವಣೆ ಕುರಿತಾದ ವಿಡಿಯೋ ಪ್ರದರ್ಶನ ನಡೆಸಲಾಯಿತು.. ಕುಮಾರಿ ಪ್ರತೀಕ್ಷಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಕುಮಾರಿ ನಾಗಶ್ರೀ ಸ್ವಾಗತಿಸಿದರು.