Wednesday, 24 September 2014
Sunday, 17 August 2014
ಪ್ರತಿಭಾ ಕಾರಂಜಿ ಸರ್ವರಿಗೂ ಆದರದ ಸ್ವಾಗತಗಳು
ಆತ್ಮೀಯ ಕರೆಯೋಲೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕುಂದಾಪುರ
ಸಮೂಹ ಸಂಪನ್ಮೂಲ ಕೇಂದ್ರ ಕುಂದಾಪುರ
ಕ್ಷೇತ್ರ ಸಂಪನ್ಮೂಲ ಕೆಂದ್ರ ಕೆದೂರು
ಹಾಗೂ
ಸರಕಾರಿ ಪ್ರೌಢಶಾಲೆ ಕೆದೂರು ಇವರ ಸಂಯುಕ್ತ ಆಶ್ರಯದಲ್ಲಿ
ದಿನಾಂಕ:21/08/2014
ರಂದು 2014-15
ನೇ
ಸಾಲಿನ ಕೆದೂರು ಕ್ಲಸ್ಟರ್ ಮಟ್ಟದ
ಪ್ರತಿಭಾ ಕಾರಂಜಿ ಕಾರ್ಯಕ್ರಮ
ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಬಯಸುವ
ಅಧ್ಯಕ್ಷರು,ಹಾಗೂ ಸರ್ವ ಸದಸ್ಯರು S.D.M.C.
ಹಾಗೂ
ಮುಖ್ಯ ಶಿಕ್ಷಕರು,ಬೋಧಕ&ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು
ಸರಕಾರಿ ಪ್ರೌಢಶಾಲೆ ಕೆದೂರು
Friday, 15 August 2014
ಸ್ವಾತಂತ್ರ್ಯ ಸಂಭ್ರಮ
ಸರ್ವರಿಗೂ 68 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು
ಸ್ವಾತಂತ್ರ್ಯ ಸಂಭ್ರಮ
ನಮ್ಮ ಶಾಲೆಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಸರಿಯಾಗಿ 68 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.ರೊಟೇರಿಯನ್ ಶ್ರೀ ಚಂದ್ರಶೇಖರ್ ಹೆಗ್ಡೆ ಶಾನಾಡಿ ಇವರು ಧ್ವಜಾರೋಹಣ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕರುಣಾಕರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕೆದೂರು, ಶ್ರೀ ಶೇಖರ್ ಶೆಟ್ಟಿ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಕೆದೂರು, ಶ್ರೀ ಅರುಣ್ ಕುಮಾರ್ ಶೆಟ್ಟಿ ಉದ್ಯಮಿಗಳು&ಮಾಲಕರು ಶ್ರೀ ಸಿದ್ದಿವಿನಾಯಕ್ ಟೆಂಟ್ ಹೌಸ್ ತೆಕ್ಕಟ್ಟೆ ಇವರು ಭಾಗವಹಿಸಿದ್ದರು.ಹಳೆಯ ವಿದ್ಯಾರ್ಥಿಗಳು, ದಾನಿಗಳು,ವಿದ್ಯಾಭಿಮಾನಿಗಳು, ಪೋಷಕರು,ಪಾಲಕರು ಆಗಮಿಸಿ ಸಮಾರಂಭಕ್ಕೆ ಶುಭ ಕೋರಿದರು. ಶಾಲೆಯ ಬೋಧಕ&ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವಂದೇಮಾತರಂ, ಧ್ವಜ ಗೀತೆ ಸುಶ್ರಾವ್ಯವಾಗಿ ಮೂಡಿಬಂತು.
Subscribe to:
Posts (Atom)