Wednesday, 31 July 2013
ಬಾಲ ಕಾರ್ಮಿಕ ವಿರೋಧಿ ದಿನಾಚರಣೆ
ವಿಶ್ವದಾದ್ಯಂತ ಅಸಂಖ್ಯಾತ ಬಾಲಕರು ಇಂದು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಬಾಲ ಕಾರ್ಮಿಕತೆ ಒಂದು. 14 ವರ್ಷದೊಳಗಿನ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದು ಅದರ ಕುರಿತಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಜಾಥಾದ ಮೂಲಕ ಸಂಘಟಿಸಿದ ರೀತಿ.
ವರದಿ- ಮಹಾಬಲೇಶ್ವರ ಭಾಗ್ವತ್-ಸಹಶಿಕ್ಷಕರು
Saturday, 27 July 2013
ಪರಿಸರ ದಿನಾಚರಣೆ
ಜೂನ್ 05
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸರಕಾರಿ ಪ್ರೌಢಶಾಲೆ ಕೆದೂರು ಇಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ನಿಸರ್ಗ ಇಕೋ ಕ್ಲಬ್ ಆಶ್ರಯದಲ್ಲಿ ಗಿಡನೆಡುವುದರ ಜೊತೆಗೆ , ಪರಿಸರ ಸಂರಕ್ಷಣೆ ಪ್ರತಿಜ್ಞೆ ಸ್ವೀಕರಿಸಿದರು. ನಮ್ಮ ಶಾಲಾ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು& ಸಹಶಿಕ್ಷಕರ ಮಾರ್ಗದರ್ಶನದಲ್ಲಿ ಸುಂದರವಾದ ಶಾಲಾ ಕೈತೋಟ ನಿರ್ಮಾಣ ಮಾಡಿದ್ದು ಅದರ ಕೆಲವು ಚಿತ್ರಗಳು ಇಲ್ಲಿವೆ.
ಶಾಲಾ ವನ ಸ್ವಚ್ಛತೆ ಹಾಗೂ ಗಿಡನೆಡುವುದರಮೂಲಕ ಪರಿಸರ ರಕ್ಷಿಸುವ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯಗಳನ್ನು ಸಕ್ರಿಯವಾಗಿ ಮಾಡಿದಾಗ ಮುಂದಿನ ಜನಾಂಗಕ್ಕೆ ಅಮೂಲ್ಯ ಪರಿಸರದ ಕೊಡುಗೆ ನೀಡಬಹುದು.ಶಾಲೆಯ ಸುಂದರ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಹೊಣೆ ಅತ್ಯಂತ ಮಹತ್ವದ್ದಾಗಿದೆ.ಸಹಶಿಕ್ಷಕರ ಮಾರ್ಗದರ್ಶನದಡಿಯಲ್ಲಿ ಉತ್ತಮವಾದ ಕಾರ್ಯಕ್ರಮಗಳು ಮೂಡಿಬರಲೆಂದು ಆಶಿಸುವ ---
ಶ್ರೀ ನಿರಂಜನ ನಾಯಕ್
ಪ್ರಭಾರ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕೆದೂರು
Subscribe to:
Posts (Atom)